Song Cover Image

ಖೇಡಗಿ ಚೌಡೇಶ್ವರಿ ಅಮ್ಮ

+ Show full styles
V6-MINI

[Intro] ಶ್ರೀ ಖೇಡಗಿ ಚೌಡೇಶ್ವರಿ ಅಮ್ಮ ನನ್ನವ್ವ ನಿನ್ನ ಪಾದಗಳಿಗೆ ಶರಣು ಶರಣಂದೆ ತಾಯಿ ಖೇಡಗಿ ಶ್ರೀ ಚೌಡೇಶ್ವರಿ ಜಗನ್ಮಾತೆ ನಿನಗೆ ಕರ್ಪೂರದ ಆರತಿ [Verse 1] ನಿನ್ನ ಕರೆಯದೆ ಯಾರನ್ನು ಕರೆಯಲಿ ಅಮ್ಮ.... ಕಣ್ಣೀರು ನಿಲ್ಲುತ್ತಿಲ್ಲ, ಹೃದಯ ತಾಳುತ್ತಿಲ್ಲ ಜಗನ್ಮಾತೆಯಮ್ಮ ಕರುಣಿಸು ತಾಯಿ ಇಂದೇ ನೀನು ಶ್ರೀ ಚೌಡೇಶ್ವರಿ ಅಮ್ಮ [Verse 2] ನಿನ್ನ ಪಾದದ ನೆರಳಲ್ಲಿ ನನ್ನ ಜೀವ ಇಟ್ಟಿರುವೆ ಶ್ರೀ ಚೌಡೇಶ್ವರಿ ಅಮ್ಮ.... ಎಷ್ಟು ನೋವು ಮರೆಮಾಚಲಿ, ಎಷ್ಟು ಕಣ್ಣೀರು ನುಂಗಲಿ ನನ್ನ ಕೈ ಹಿಡಿದು ಶ್ರೀ ಚೌಡೇಶ್ವರಿ ನಡಿಸಮ್ಮ ಓ ನನ್ನ ದೇವರೇ, ದಾರಿ ನನ್ನ ಬಾಳಿನ ದಾರಿ ದೀಪ ನೀ ನಮ್ಮ [Chorus] ನನ್ನೊಳಗಿನ ಈ ನೋವನ್ನು ನಿನ್ನ ಹೊರತು ಯಾರಿಗೆ ಹೇಳಲಿ, ಎಲ್ಲರೂ ದೂರವಾದಾಗ ನೀನೇ ನೆನಪಾದೆ ನನ್ನ ದೇವತೆ ಚೌಡೇಶ್ವರಿ ಅಮ್ಮಮ್ಮ ಕತ್ತಲಾದ ನನ್ನ ದಾರಿಯಲ್ಲಿ ನೀನೇ ಬೆಳಕಾದೆ, ನನ್ನ ಮನಸ್ಸು ನೀನೇ ಕಾಪಾಡು ಶ್ರೀ ಚೌಡೇಶ್ವರಿ ಅಮ್ಮ [Verse 3] ನನ್ನ ಜೀವ ನೀನಯ್ಯ, ನನ್ನ ಬದುಕೇ ನೀನೇ ನನ್ನ ಅಮ್ಮ.... ನನ್ನೊಳಗೆ ನೀನೇ ತುಂಬಿರುವೆ ಶ್ರೀ ಚೌಡೇಶ್ವರಿ ಅಮ್ಮ ಕಣ್ಣಲ್ಲೂ ನೀನೆ, ಮನದಲ್ಲೂ ನೀನೆ, ಎಲ್ಲೆಲ್ಲೂ ಲೋಕವೂ ನೀನೆ ನನ್ನ ದೈವವೂ ಶ್ರೀ ಚೌಡೇಶ್ವರಿ ಅಮ್ಮಮ್ಮ ನನ್ನ ದೇವರೂ ನೀನೆ ನನ್ನ ಅಮ್ಮ.... [Chorus] ಒಮ್ಮೆ ನನ್ನ ಕಡೆ ನೋಡು ನೀನೆ ನನ್ನ ಶ್ರೀ ಚೌಡೇಶ್ವರಿ ಅಮ್ಮ ಒಮ್ಮೆ ನನ್ನ ಮಾತು ಶ್ರೀ ಚೌಡೇಶ್ವರಿ ಅಮ್ಮ..... ಕಣ್ಣು ತೆರೆದು ನನ್ನ ಕಡೆ ನೀನೇ ನನ್ನ ಲೋಕವು ಕಾಯುವ ಶ್ರೀ ಚೌಡೇಶ್ವರಿ ನೀನೆ ನನ್ನ [Verse 4] ನಾನು ಅಳುವುದನ್ನೂ ನೋಡಿ ಮೌನವಾಗಿರಬೇಡ ಶ್ರೀ ಚೌಡೇಶ್ವರಿ ಅಮ್ಮಮ್ಮ ನಿನ್ನ ಕರುಣೆಯ ಒಂದು ಹನಿ ನನ್ನ ಬದುಕಿಗೆ ಸಾಕಮ್ಮ ಕೈಯಲ್ಲಿ ಏನೂ ಇಲ್ಲ, ಕಣ್ಣಲ್ಲಿ ನೀರೇ ಉಳಿದಿದೆ, ಕೊಡಲು ಹೂವೂ ಇಲ್ಲ, ಹೇಳಲು ಮಾತೂ ಇಲ್ಲ [Verse 5] ಒಡೆದ ಈ ಹೃದಯವನ್ನೇ ನಿನ್ನ ಮುಂದೆ ಇಟ್ಟಿರುವೆ, ನನ್ನ ತಪ್ಪುಗಳೆಲ್ಲ ಮರೆತು ನಿನ್ನ ಮಗು ಎಂದು ಒಪ್ಪಿಕೋ ಶ್ರೀ ಚೌಡೇಶ್ವರಿ ನಮ್ಮಮ್ಮ ಖೇಡಗಿ ಚೌಡೇಶ್ವರಿ ಅಮ್ಮಮ್ಮ ನಿನ್ನ ನಾಮ ಜಪಿಸುತ್ತಾ ನನ್ನ ದಿನ ಕಳೆಯಲಿ, ನಿನ್ನ ಪಾದದ ನೆರಳಲ್ಲಿ ನನ್ನ ಉಸಿರು ಸಾಗಲಿ [Bridge] ಜಗವೆಲ್ಲ ನನ್ನ ಮರೆತರೂ ನೀನು ನನ್ನ ಮರೆಯಬೇಡ, ನನ್ನ ಹೆಜ್ಜೆ ತಪ್ಪಿದಾಗ ನೀನು ಕೈಬಿಡಬೇಡ ನೋವಿನ ದಾರಿಯಾದರೂ ನಿನ್ನ ಜೊತೆ ನಡೆಯುವೆ, ಕಣ್ಣೀರು ಬಂದರೂ ಶ್ರೀ ಚೌಡೇಶ್ವರಿ ಅಮ್ಮಮ್ಮ ನಿನ್ನ ನಾಮ ಹಾಡುವೆ ಉಸಿರು ಇರುವವರೆಗೂ ನಿನ್ನನ್ನೇ ನೆನೆಯುವೆ [Verse 6] ಶ್ರೀ ಖೇಡಗಿ ಚೌಡೇಶ್ವರಿ ಅಮ್ಮಮ್ಮ ನೀನು ದಯ ತೋರಮ್ಮ ನನ್ನ ಕಣ್ಣೀರ ಶ್ರೀ ಚೌಡೇಶ್ವರಿ ಅಮ್ಮಮ್ಮ ಓ ನನ್ನ ದೇವತೆ ಅಮ್ಮಮ್ಮ ಒಮ್ಮೆ ಬಂದು ಕಾಪಾಡ ಅಮ್ಮಮ್ಮ ನನ್ನ ಹೃದಯ ಮುಟ್ಟಮ್ಮ ಶ್ರೀ ಚೌಡೇಶ್ವರಿ ಅಮ್ಮಮ್ಮ ನಿನ್ನ ಹೊರತು ನನಗೇನಿದೆ, ನಿನ್ನ ಹೊರತು ನನಗಾರು [Chorus] ನಿನ್ನ ಪಾದದ ನೆರಳೊಂದೇ ನನ್ನ ಬದುಕಿನ ಆಸರೆ ನೀ ನಮ್ಮ ನನ್ನನ್ನು ಬಿಟ್ಟು ಹೋಗಬೇಡ ಶ್ರೀ ಚೌಡೇಶ್ವರಿ ಅಮ್ಮಮ್ಮ ನಾನು ಯಾರ ಬಳಿಗೆ ಹೋಗಲಿ, ನಿನ್ನ ಹೊರತು ಯಾರನ್ನು ಕರೆಯಲಿ [Verse 7] ನನ್ನ ಕೊನೆಯ ಕಣ್ಣೀರ ಹನಿಯೂ ನಿನ್ನ ಹೆಸರಾಗಿರಲಿ, ನನ್ನ ಕೊನೆಯ ಉಸಿರೂ ನಿನ್ನ ಪಾದ ಸೇರಲಿ ನನ್ನ ಬಾಳಿಗೆ ನೀನೇ ನೀನೇ ಬಂಗಾರ ತಾಯಿ ನನ್ನ ಬದುಕು ಕೈ ಹಿಡಿದು ಕೈ ಹಿಡಿದು ನಡೆಸು ನನ್ನ ಅಮ್ಮ ನನ್ನ ಬದುಕಿನ ದಾರಿ ದೀಪ ನೀನೆ ನನ್ನ ಶ್ರೀ ಚೌಡೇಶ್ವರಿ ಅಮ್ಮಮ್ಮ [Final Chorus] ನಿನ್ನ ಕರುಣೆಯಲ್ಲೇ ನನ್ನ ಜೀವ ಕರಗಲಿ, ನಿನ್ನ ನಾಮದಲ್ಲೇ ನನ್ನ ಉಸಿರು ನಿಲ್ಲಲಿ ಶ್ರೀ ಚೌಡೇಶ್ವರಿ ಅಮ್ಮಮ್ಮ ಕೇಡಗಿ ಚೌಡೇಶ್ವರಿ ಜಗನ್ಮಾತೆ ಕರುಣಿಸು ತಾಯಂದೆ ನೀನು ನಮ್ಮಮ್ಮ ಕರುಣಿಸು ತಾಯಿ ಜಗನ್ಮಾತೆ [Outro] ಶ್ರೀ ಖೇಡಗಿ ಚೌಡೇಶ್ವರಿ ಜಗನ್ಮಾತೆ ನನ್ನ ನಂದಾದೀಪ ನೀ ನಮ್ಮ ಕಾಪಾಡು ತಾಯಿ ನಮ್ಮಮ್ಮ ನಿನ್ನ ಪಾದಗಳಿಗೆ ಶರಣು ಶರಣು ಈ ಉಸಿರು ನಿಂದೇ ಅಮ್ಮ ನೀನೇ ನನ್ನ ದೈವ ಆಆಆಆ… ಓಓಓ… ನಮೋ ನಮೋ ತಾಯಿ ನಿನ್ನ ಪಾದಗಳಿಗೆ ಪೂಜಿಸುವೆ ತಾಯಿ ನಿನ್ನ ಈ ಉಸಿರು ಇರುವ ತನಕ ಈ ಬಾಳು ಬೆಳಗು ತನಕ ಗೀತೆ ರಚನೆ ಸಾಹಿತ್ಯ ಡಾಕ್ಟರ ಚಂದ್ರಕಾಂತ ಪಾಟೀಲ್ ಕಲ್ಬುರ್ಗಿ ಖೇಡಗಿ